ಅಣುಶಕ್ತಿ ವಿಭಾಗದಭಾರಜಲ ಮಂಡಳದಪೂರ್ವ ಅದ್ಯಕ್ಷ ಮತ್ತು ಮುಖ್ಯ ಕಾರ್ಯಾಧಿಕಾರಿ, ಶ್ರೀ ಎಚ್. ಎಸ್. ಕಾಮತರು ಭಾರಜಲದ ಉತ್ಪಾದನೆಯನ್ನು ಸಾಧಿಸಿದ ಮತ್ತು ದೇಶದ ಸ್ವಾವಲಂಬಿತನ (ಆತ್ಮನಿರ್ಭರತೆ)ಕ್ಕೆ ಹೋರಾಡಿದ ಅಗ್ರಗಣ್ಯ ವ್ಯಕ್ತಿ. ಈ ಸಾಧನೆ. ಇವರ ಕಟ್ಟುಪಾಡು ಮತ್ತು ಕಾರ್ಯ ಸಮರ್ಪಣೆ ಗುಣಗಳಿಂದ ಆಯಿತು. ಇವರು ಕೈಕೊಂಡ ಕಾರ್ಯಕ್ರಮದ ಯಶಸ್ಸು, ದೇಶದ ಸ್ವಾಭಿಮಾನ ಹೆಚ್ಚಿಸುವ ಜೊತೆಗೆ ಇಂತಹ ರೋಚಕ ತಂತ್ರಜ್ಞಾನದಲ್ಲಿ ಭಾರತವನ್ನು ಜಗತ್ತಿನ ಧುರೀಣ ದೇಶವನ್ನಾಗಿ ಮಾಡಿತು. ಆ ದಿನಗಳಲ್ಲಿ ಭಾರತವು ತನ್ನ ಗುರುತು ನೊಂದಾಯಿಸುವ ಮತ್ತು ದೇಶ ಕಟ್ಟುವ ಪ್ರಾರಂಭಿಕಸ್ಥಿತಿಯಲ್ಲಿತ್ತು. ದೇಶದ ರಕ್ಷಣೆ ಸಂಬಂದಿಸಿದ ಯುಕ್ತಿ ಮತ್ತು ಅಣುಶಕ್ತಿಗಳ ಅವಶ್ಯಕತೆಗಾಗಿ ಅಣುಶಕ್ತಿ ವ್ಯಾಪ್ತಿಯಲ್ಲಿ ಕೆಲಸ ಮಾಡುವದು ಒಂದು ಆವ್ಹಾನವೆ. ಒತ್ತಡ ಹೊಂದಿದ ಭಾರಜಲದ ನಾಭಿಕ ಸ್ಥಾವರಗಳನ್ನು (Pressurised Heavy Water Reactor PHWR) ನಿರ್ಮಿಸುವ ಯೋಜನೆಯನ್ನು ಭಾರತವು ಹಾಕಿ ಕೊಂಡಿತ್ತು. ನಿಸರ್ಗದಲ್ಲಿ ಅತಿ ಕಡಿಮೆಯಾಗಿ ಸಿಗುವ (ಕೆಲವು ಅಣುಗಳು ಮಾತ್ರ) ಈ ಭಾರಜಲದ ಅವಶ್ಯಕತೆ ಅತಿ ದೊಡ್ಡ ಪ್ರಮಾಣದಲ್ಲಿ ಬೇಕಾಗಿತ್ತು. ಅತಿ ಶುದ್ಧವಾದ ಮತ್ತು ದೊಡ್ಡ ಪ್ರಮಾಣದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ವಿಧಾನದ ಶೋಧನೆ, ತಂತ್ರಜ್ಞಾನದಲ್ಲಿ ಒಂದು ಕಠಿಣ ಆಹ್ವಾನಆಗಿತ್ತು. ಇದೊಂದು ಧೈಯ ಪೂರ್ಣ ಕಾರ್ಯಕ್ರಮ. ಅದರಲ್ಲಿ ಶ್ರೀ ಎಚ್. ಎಸ್. ಕಾಮತರು ಒಬ್ಬ ಸದಸ್ಯರಾಗಿದ್ದರು. ತಮ್ಮ ಸಮರ್ಪಣೆ ಭಾವ ಮತ್ತು ಬುದ್ಧಿ ಚಾತುರ್ಯ ಗಳಿಂದ ಈ ತಂತ್ರಜ್ಞಾನದ ಗರ್ಭವನ್ನು ಮುಟ್ಟುವದರಲ್ಲಿ ಇವರ ಕೊಡುಗೆ ಸಾಕಷ್ಟು ಇದೆ. ಹೀಗಾಗಿ ಭಾರಜಲ ಸಂಸ್ಥೆಯ ಅದ್ಯಕ್ಷ ಮತ್ತು ಮುಖ್ಯ ಕಾರ್ಯಾಧಿಕಾರಿಯ ಮಹತ್ವದಹುದ್ದೆಯನ್ನು ಇವರು ಮೇಲೇರುತ್ತ ತಲುಪಿದರು. ತಮ್ಮ ಕಾರ್ಯಾವಧಿಯಲ್ಲಿ ಅವಿಶ್ರಾಂತದಿಂದ ಕಾರ್ಯ ನಿಭಾಯಿಸಿದ ಯೋಗ್ಯತಾ ಪತ್ರ ಎಂಬಂತೆ ದೇಶವು ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಇವರನ್ನು ಸನ್ಮಾನಿಸಿತು. ಕಾರ್ಯಕ್ಕೆ ಅಸಂಬಂಧ ರಹಿತ ಗುಣವುಳ್ಳ ವ್ಯಕ್ತಿಎಂದು ನಾನು ಇವರನ್ನು ತಿಳಿದಿದ್ದೇನೆ. ಯಂತ್ರ ಶಾಸ್ತ್ರ ಮತ್ತು ಯೋಚಿಸುವ ಬಗೆಗಳಲ್ಲಿ ಅಪಾರವಾದ ಅನುಭವದಿಂದ ಇವರು ಅನುಸಂಧಾನದಲ್ಲಿ ಕೈಪಿಡಿ ಇದ್ದಂತೆ. ಇವರು ಕಠೋರ ಆದರೆ ತಿಳಿವಳಿಕೆಯವರು, ದೃಢರು ಆದರೆ ದಯಾಳು, ಕಾರ್ಯಾಕಾಂಕ್ಷಿ ಆದರೆ ಕೃಪಾಳು. ಇಂತಹ ಗುಣಗಳನ್ನು ಅಳವಡಿಸಿಕೊಂಡಿದ್ದ ಇವರು ಜಟಿಲವಾದ ಭಾರಜಲದ ಕಾರ್ಯಕ್ರಮಕ್ಕೆ ದಾರಿಯಾದರು. ಇವರಂತಹ ಕಾರ್ಯನಿರತರನ್ನು ನಾನು ನೋಡಿಲ್ಲ. ತಮ್ಮ ಕಾರ್ಯದಲ್ಲಿ ಮುತ್ಸದ್ದಿತನ ಮತ್ತು ಮಂದಹಾಸ ಗಳನ್ನು ತೋರಿಸಿದಾಗ, ಧುರೀಣ ಮತ್ತು ಸಾಮಾನ್ಯರ ನಡುವೆ ಸಮರಸವು ಕಾಣಿಸುತ್ತಿತ್ತು. ಅಂತೆಲೆ ಇವರು ವಿರಳ ಗುಣಗಳ ಬೆರಿಸಿದ ವ್ಯಕ್ತಿ. ನನ್ನ ಇತ್ತೀಚಿನ ವಹಿವಾಟುಗಳಿಂದ ಕಂಡಿದ್ದೇನೆಂದರೆ ಇವರು ಕಾರ್ಯಾಸಕ್ತರು. ಇವರ ಜೀವನ ಚರಿತ್ರೆಯು ಮುಂದಿನ ಧುರೀಣರಾಗುವ ಬಯಕೆಯ ಯುವಕರಿಗೆ ಧುರೀಣತೆಯ ಅರ್ಥ ಬೀರೂವ ದಾರಿದೀಪ. ಇದನ್ನು ಯಾವುದೆ ವ್ಯವಸ್ಥಾಪಕ ಸಂಸ್ಥೆಯಲ್ಲಿ ಕಲಿಸಲಾಗುವದಿಲ್ಲ. ಆದರೆ ಎಚ್. ಎಸ್. ಕಾಮತರಂತಹ ಸಮರ್ಥ ವ್ಯಕ್ತಿಗಳಿಂದ ಸಾಧ್ಯ. ಇನ್ನು ಹಲವು ಕ್ರಿಯಾಸಕ್ತ ಜೀವನದ ವರ್ಷಗಳಿಗಾಗಿ ಮತ್ತು ದೇಶಕ್ಕೆ ಇವರ ಸೇವೆಯು ಆಗಲೆಂದು ನಾನು ಹಾರೈಸುವೆ.
₹350.00 Original price was: ₹350.00.₹280.00Current price is: ₹280.00.


